ಪ್ರದರ್ಶನ ಕಲೆ ಮತ್ತು ಮೂಢನಂಬಿಕೆ |
ಮೊದಲಿಗೆ ಮೂಢನಂಬಿಕೆ ಹಾಗೂ ಪವಾಡದ ವ್ಯತ್ಯಾಸವನ್ನು ತಿಳಿಯೋಣ. ಮೂಢನಂಬಿಕೆಯೆಂದರೆ ಮನುಷ್ಯನ ಮನಸ್ಸಿನಲ್ಲಿ ಯಾವುದಾದರು ಒಂದು ವಿಷಯದ ಬಗ್ಗೆ ಸತ್ಯ ಅಸತ್ಯದ ಹೊರತಾಗಿ ಉಂಟಾಗುವ ಧೃಡವಾದ ನಂಬಿಕೆ. ಪವಾಡವೆಂದರೆ ಸಿದ್ದಿಪುರುಷರಲ್ಲಿರುವಂತಹ ಶಕ್ತಿ. ಅದರಿಂದ ಅವರು ಎಲ್ಲಾ ಕಾರ್ಯಗಳನ್ನು ಸಿದ್ದಿಸಲು ಶಕ್ತರಾಗಿರುತ್ತಾರೆ.
ಕಲೆಯಲ್ಲಿ ಮೂಢನಂಬಿಕೆಯೆಂಬುದು ಆದಿ ಮಾನವನ ಕಾಲದಿಂದಲೂ ಪ್ರಯೋಗದಲ್ಲಿದೆ. ಪ್ರತಿಯೊಬ್ಬರೂ ಯಾವುದಾದರೊಂದು ಮೂಢನಂಬಿಕೆಯಲ್ಲಿ ಇರುವುದು ಸಾಮಾನ್ಯ. ಕೆಲವರು ತಮ್ಮ ವೈಯಕ್ತಿಕ ವಿಷಯದಲ್ಲಿ ಮೂಏನಂಬಿಕೆಯನ್ನಿರಿಸಿಕೊಳ್ಳುತ್ತಾರೆ. ಕೆಲಚರು ಕಲೆಯಲ್ಲಿ ಅಂದರೆ ಸಂಗೀತದಲ್ಲಿ ಕೆಲವು ರಾಗಗಳನ್ನು ಹಾಡಿದರೆ ತಮಗೆ ತೊಂದರೆ ಉಂಟಾಗುತ್ತದೆ ಎಂಬ ಮೂಢನಂಬಿಕೆಯನ್ನಿರಿಕೊಳ್ಳುವಿದನ್ನು ಕಾಣುತ್ತೇವೆ.
ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ತಮ್ಮ ಸಿದ್ದಿಯಿಂದ ಅನೇಕ ಪವಾಡವನ್ನು ಮಾಡಿದ್ದಾರೆ.
ದೀಕ್ಷಿತರು ಅಮೃತವರ್ಷಿಣಿ ರಾಗ ಹಾಡಿ ಮಳೆ ಬರಿಸಿರುವುದು, ತ್ಯಾಗರಾಜರು ಸತ್ತಿದ್ದವರನ್ನು ಸಂಗೀತದಿಂದ ಬದುಕಿಸಿದ್ದು, ತಾನ್ ಸೇನರು ಅಕ್ಬರರ ಆಸ್ಥಾನದಲ್ಲಿ ದೀಪಕರಾಗ ಹಾಡಿ ದೀಪವನ್ನು ಉರಿಯುವಂತೆ ಮಾಡಿದ್ದರು. ಈ ರೀತಿಯ ವಿಷಯಗಳು ಕುತೂಹಲ ಹೆಚ್ಚಿಸುವಂತಹದು. ಅವರು ಸಿದ್ದಿ ಪುರಿಷರಾದ ಕಾರಣ ಅವರಿಂದ ಈ ರೀತಿಯ ಪವಾಡವು ಆಗಲು ಸಾಧ್ಯ.
ಯುವ ಪೀಳಿಗೆಯವರು ಕರ್ನಾಟಕ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಎಲ್ಲವನ್ನೂ ಆಸಕ್ತಿಯಿಂದ ಕಲಿತು ಯಾವುದೇ ಮೂಢನಂಬಿಕೆಯು ಇರದೆ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಸಂತೀಷದ ವಿಷಯವೇ ಆಗಿದೆ.
ಎಲ್ಲಾ ವಿಷಯಗಳಲ್ಲಿಯೂ, ಕ್ಷೇತ್ರಗಳಲ್ಲಿಯೂ ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಇರಬಾರದರು.
|
Author:
|
Submitted on : 30-Mar-2025
|
Arts : India/ Music/ Carnatic Classical Music |
Journal ID : 0031-101-0082
|
|
|
Views: 7/ Downloads :0 |
|
|
|
|