“ಆಧುನಿಕ ಪರಿಕಲ್ಪನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ” – ಒಂದು ಚಿಂತನೆ |
ಅಮೂರ್ತ :
ಪ್ರಪಂಚದಾದ್ಯಂತ ಸಾಂಸ್ಕೃತಿಕ ಕಲೆಗಳಲ್ಲಿ ಸಂಗೀತವು ಒಂದು ಮುಖ್ಯವಾದ ಕಲಾಪ್ರಕಾರವಾಗಿದೆ. ಲಲಿತಕಲೆಗಳಲ್ಲಿ ಶ್ರೇಷ್ಠವೆಂದು ಪರಿಗಣಿಸಲಾದ ಈ ಕಲೆಯು ಆಯಾ ದೇಶ, ಕಾಲ, ಜನಜೀವನ ಶೈಲಿ, ಪರಿಸರ, ಹವಾಮಾನ, ಮುಂತಾದವುಗಳಿಂದ ಪ್ರಭಾವಿತವಾಗಿರುತ್ತದೆ. ಹೀಗಾಗಿ, ಯಾವುದೇ ದೇಶದ ಸಂಸ್ಕೃತಿಯನ್ನು ತಿಳಿಯಬೇಕಿದ್ದರೆ ಆ ದೇಶದ ಸಂಗೀತ ಮತ್ತು ಇತರ ಲಲಿತ ಕಲೆಗಳ ಕಡೆಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಭಾರತೀಯ ಸಂಗೀತವೂ ಇದಕ್ಕೆ ಹೊರತಲ್ಲ. ವಿಸ್ತಾರವಾದ ಭಾರತ ದೇಶದಲ್ಲಿ `ಅನೇಕತೆಯಲ್ಲಿ ಏಕತೆ` ಎಂಬ ಸಂಸ್ಕೃತಿಯು ವಿಶಿಷ್ಟವಾದದ್ದು. ಇದಕ್ಕೆ ಅನುಗುಣವಾಗಿ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಅವುಗಳದ್ದೇ ಆದ ವಿಶೇಷವಾದ ಸಂಗೀತ ಪ್ರಕಾರಗಳು ಕಂಡುಬರುತ್ತವೆ. ಅವುಗಳಲ್ಲಿ ಶಾಸ್ತ್ರೀಯ, ಜಾನಪದ, ಧಾರ್ಮಿಕ, ಲಘು ಶಾಸ್ತ್ರೀಯ, ಸುಗಮಸಂಗೀತ, ಚಲನಚಿತ್ರ ಸಂಗೀತ, ಮುಂತಾದ ಅನೇಕ ಪ್ರಕಾರಗಳ ಸಂಗೀತವನ್ನು ಕಾಣಬಹುದು. ಭಾರತೀಯ ಶಾಸ್ತ್ರೀಯ ಸಂಗೀತದ ಪರಿಧಿಯಲ್ಲಿ ಮುಖ್ಯವಾಗಿ ಉತ್ತರಭಾರತದಲ್ಲಿ ಔತ್ತರೇಯ ಸಂಗೀತ ಪದ್ಧತಿ- ಎಂದರೆ, ಹಿಂದೂಸ್ತಾನಿ ಸಂಗೀತ ಪದ್ಧತಿ; ದಕ್ಷಿಣ ಭಾರತದಲ್ಲಿ ದಕ್ಷಿಣಾದಿ ಸಂಗೀತ -ಎಂದರೆ ಕರ್ನಾಟಕ ಸಂಗೀತ ಪದ್ಧತಿ ರೂಢಿಯಲ್ಲಿದೆ. ಪ್ರಸ್ತುತ, ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯ ಬಗ್ಗೆ ಈ ಲೇಖನ ಗಮನ ಹರಿಸುತ್ತದೆ. ಆಧುನಿಕ ಯುಗದಲ್ಲಿ ನಮ್ಮ ಶಾಸ್ತ್ರೀಯ ಸಂಗೀತದ ಪರಿಕಲ್ಪನೆ ಹೇಗೆಲ್ಲ ಬೆಳೆದಿದೆ, ಮಾರ್ಪಾಡು ಹೊಂದುತ್ತಿದೆ ಎಂಬ ವಿಷಯದ ಬಗ್ಗೆ ಕೆಲವು ಪರಿವೀಕ್ಷಣೆಗಳನ್ನು ಹಂಚಿಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
|
Author: Dr Manjula M R
|
Submitted on : 05-Feb-2025
|
Arts : India/ Music/ Carnatic Classical Music |
Journal ID : 0031-101-0070
|
|
|
Views: 29/ Downloads :0 |
|
|
|
|