ವೀಣೆಯ ಇತಿಹಾಸ ಮತ್ತು ಬೆಳವಣಿಗೆ |
ಭಾರತೀಯ ಸಂಗೀತ ವಾದ್ಯಗಳಲ್ಲಿ ವೀಣೆಗೆ ಸರಿಸಮನಾದದು ಬೇರೊಂದು ಇಲ್ಲ. ಇದು ಹಿಂದಿನ ಕಾಲದಿಂದ ಭಾರತೀಯ ಸಂಗೀತದ ಮಾರ್ಗದರ್ಶಕ ನಕ್ಷತ್ರವಾಗಿದೆ. ಬಹಳ ಪುರಾತನ ಕಾಲದಲ್ಲಿ ಮಾನವನು ಬೇಟೆಯಾಡಲು ಬಾಣಪ್ರಯೋಗ ಮಾಡಿದಾಗ ಬಿಲ್ಲಿನಿಂದ ಹೊರಟ ಮಧುರವಾದ ಘೋಷವೂ ವೀಣೆಯನ್ನು ರೂಪಿಸಲು ಪ್ರಚೋದಿಸಿತು.
ವೀಣೆಯಲ್ಲಿ ಹಲವು ವಿಧಗಳಿವೆ. ನಕುಲ, ಕಿನ್ನರಿ, ಚಿತ್ರ, ಪರಿವಾದಿನಿ, ವಿಪಂಚಿ ಮುಂತಾದವು. ಸರಸ್ವತಿ ದೇವಿಯು ಕಚ್ಛಪಿ ಎಂಬ ವೀಣೆಯನ್ನು ಮತ್ತು ನಾರದರು ಮಹತೀ ಎಂಬ ವೀಣೆಯನ್ನು ನುಡಿಸುತ್ತಿದ್ದರಿಂದ ಉಲ್ಲೇಖವಿದೆ. ಅನೇಕ ಲಾಕ್ಷಣಿಕರು ತಮ್ಮ ಲಕ್ಷಣ ಗ್ರಂಥದಲ್ಲಿ ವೀಣೆಯ ಬಗ್ಗೆ ಒಂದು ಅಧ್ಯಾಯವನ್ನೇ ರಚಿಸಿದ್ದಾರೆ.
ಸುಮಾರು ೧೨ನೇ ಶತಮಾನದವರೆಗೆ ವೀಣೆಯು ಬೆರಳುಗಳಿಂದ ಅಥವಾ ಕಡ್ಡಿಗಳಿಂದ, ಕಮಾನುಗಳಿಂದ ನುಡಿಸಲಾಗುತ್ತಿತ್ತು. ನಂತರ ೧೬ನೇ ಶತಮಾನದಲ್ಲಿ ಪ್ರಗತಿಪಥದಲ್ಲಿ ಸಾಗಿದ ವೀಣೆಯು ೧೭ನೇ ಶತಮಾನದಲ್ಲಿ ಗೋವಿಂದ ದೀಕ್ಷಿತ ರಿಂದ ಈಗಿನ ವೀಣೆಯ ರೂಪ ಪರಿಪಕ್ವವಾಗಿ ಮೂಡಿಬಂದಿತು.
|
Author:
|
Submitted on : 22-Oct-2024
|
Arts : India/ Instrumental Music/ Veena |
Journal ID : 0039-101-0069
|
|
|
Views: 34/ Downloads :0 |
|
|
|
|