ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಂಗೀತದ ಪಾತ್ರ
ಭಾರತ ದೇಶದ ಅತ್ಯಮೂಲ್ಯ ಸಾಂಸ್ಕೃತಿಕ ಸಂಪತ್ತುಗಳಲ್ಲಿ ಶಾಸ್ತ್ರೀಯ ಸಂಗೀತವು ಒಂದು ಈ ಸಂಗೀತ ಪದ್ಧತಿಯು ಕರ್ಣ ಪರಂಪರೆಯಿಂದ ಉಳಿದು ಬಂದಿರುವ ಗಂಧರ್ವ ವಿದ್ಯೆ. ಸಂಗೀತ ಕಲೆಯು ಸಮಸ್ತ ಜೀವ ರಾಶಿಗಳನ್ನು ಮೋಡಿ ಮಾಡಿ ತನ್ನತ್ತ ಸೆಳೆದುಕೊಳ್ಳುತ್ತದೆ ಸಂಗೀತಕ್ಕೆ ಮಾನಸಿಕ ಒತ್ತಡವನ್ನು ಶಮನಗೊಳಿಸುವ ಶಕ್ತಿ ಇದೆ ಹಾಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಗೀತವು ಮುಖ್ಯವಾಗುತ್ತದೆ. ಸಂಗೀತದ ಹಲವು ರಾಗಗಳು ಉದಾಹರಣೆಗೆ ಮೋಹನ ಹಿಂದೋಳ ಭೈರವಿ ಮುಂತಾದರಾಗಗಳು ಮನಸ್ಸಿನ ಮೇಲೆ ಹಾಗೂ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ ಎಂದು ಹಲವು ವಿಜ್ಞಾನಿಗಳು ಸಹ ಸಮ್ಮತಿಸಿದ್ದಾರೆ. ಹಾಗಾಗಿ ಸಂಗೀತ ಚಿಕಿತ್ಸೆ ಎಂಬ ವಿಧಾನವು ಪ್ರಾರಂಭವಾಗಿ ಹಲವು ರೋಗಿಗಳು ಇದರಿಂದ ಗುಣಮುಖರಾಗುತ್ತಿದ್ದಾರೆ ಎಂಬುದು ಗಮನಾರ್ಹ ಅಂಶವಾಗಿದೆ.
Author: Submitted on : 12-Oct-2024 Arts : India/ Music/ Carnatic Classical Music
Journal ID : 0031-101-0065
Views: 26/ Downloads :0
Facebook Twitter