ಗಾಯಕ ಶಿಕಾಮಣಿ ಡಾ. ಎಲ್.‌ ಮುತ್ತಯ್ಯ ಭಾಗವತ‌ರ್ ಅವರ ಕೃತಿ ವಿಶೇಷತೆ
ಮುತ್ತಯ್ಯ ಭಾಗವತರು ತಮಿಳುನಾಡಿನ ರಾಮನಾಥಪುರಂ ತಾಲ್ಲೂಕಿನ ತಿರುನಲ್ವೇಲಿಯಲ್ಲಿ ನವಂಬರ್ 15-1877ರಲ್ಲಿ ಜನಿಸಿದರು. ತಮ್ಮ ಜೀವಿತದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದರು. ತ್ಯಾಗರಾಜೋತ್ತರ ಕಾಲದಲ್ಲಿ ಕರ್ನಾಟಕ ಸಂಗೀತವನ್ನು ಸಂಪದ್ಭರಿತವಾಗಿಸಿದ ವಿದ್ವಾಂಸರಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಮುತ್ತಯ್ಯಭಾಗವತರು, ತಮ್ಮ ಜೀವಿತದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದರು. ವಂಶವಾಹಿಯಾಗಿ ಬಂದ ಸಂಗೀತ ಮತ್ತು ವೇದಾಧ್ಯಯನಾದಿ ವಿದ್ವತ್‌ಗಳೊಂದಿಗೆ ಮುಂದೆ ಇವರು ಹರಿಕಥಾ ಕಾಲಕ್ಷೇಪದ ಮಾರ್ಗದರ್ಶನವನ್ನೂ ಪಡೆದರು. ಹೀಗೆ ಲಭ್ಯವಾದ ಸಂಗೀತ, ಸಾಹಿತ್ಯ, ವೇದಾದಿಗಳ ಉತ್ಕೃಷ್ಟ ಹಿನ್ನೆಲೆಯಿಂದಾಗಿ ಭಾಗವತರು ಬಹುಮುಖ ಪ್ರತಿಭಾವಂತರಾದರು. ಮುಂದೆ ಗಾಯಕರಾಗಿ, ಕೀರ್ತನಕಾರರಾಗಿ, ವಾಗ್ಗೇಯಕಾರರಾದ ಭಾಗವತರು, ಸ್ವಾತಿತಿರುನಾಳ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯಲ್ಲಿ ಐದು ವರ್ಷ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಆಗ ಸ್ವಾತಿತಿರುನಾಳ್ ಮಹಾರಾಜರ ಕೃತಿಗಳಿಗೆ ಪುನರುಜೀವ ಬರುವಂತೆ ಅವುಗಳನ್ನು ಅಧಿಕವಾಗಿ ಬಳಕೆಗೆ ತಂದರು. ಇಲ್ಲಿರುವಾಗಲೇ ಅವರು ರಚಿಸಿದ ಸಂಗೀತಕಲ್ಪದ್ರುಮ ಗ್ರಂಥವು ವಿಶ್ವವಿದ್ಯಾನಿಲಯದಿಂದ ಮಾನ್ಯವಾಗಿ ಇವರಿಗೆ ಡಿ. ಲಿಟ್ ಪದವಿ ಪ್ರಾಪ್ತವಾಯಿತು. ವಿಶೇಷವೆಂದರೆ ಇಡೀ ಭಾರತದೇಶದಲ್ಲೇ ಸಂಗೀತ ಕಲಾವಿದರೊಬ್ಬರಿಗೆ ಲಭ್ಯವಾದ ಪ್ರಪ್ರಥಮ ಪದವಿ ಇದಾಗಿದ್ದಿತು. ಮುತ್ತಯ್ಯ ಭಾಗವತರ ಪಾಂಡಿತ್ಯವನ್ನು ಮೆಚ್ಚಿದ ವಿವಿಧ ರಾಜ್ಯದ ರಾಜರು, ಕಲಾರಸಿಕರು, ಪೀಠಾಧಿಪತಿಗಳು, ಶ್ರೀಮಂತರು ಹಾಗೂ ವಿಶ್ವವಿದ್ಯಾನಿಲಯಗಳೂ ಇವರನ್ನು ವೈವಿಧ್ಯಮಯವಾಗಿ ಗೌರವಿಸಿತು. ಒಟ್ಟಾರೆ ತಮ್ಮ ವಿದ್ವತ್ಪದರ್ಶನದಿಂದಾಗಿ ಅತ್ಯಂತ ಜನಾನುರಾಗಿಯಾದ ಭಾಗವತರು ಅತಿ ಪ್ರಧಾನ ಪಾತ್ರ ವಹಿಸಿದರು.
Author: Submitted on : 25-Jun-2025 Arts : India/ Music/ Carnatic Classical Music
Journal ID : 0031-101-0112
Views: 79/ Downloads :0
Facebook Twitter